Verse

Menu:

ಪವಿತ್ರ ಬೈಬಲ್ : Kannada Bible (ßeta)  

Malayalam - മലയാളം Hindi - हिंदी Tamil - தமிழ் Kannada - ಕನ್ನಡ Telugu - తెలుగు 


Can't Read Kannada Words? Download Unicode Fonts.

Press CTRL + D To Bookmark This Page..:)

2 ಪೂರ್ವಕಾಲವೃತ್ತಾ: ಅಧ್ಯಾಯ 1

 
Custom Search

1. ದಾವೀದನ ಮಗನಾದ ಸೊಲೊಮೋ ನನು ತನ್ನ ರಾಜ್ಯದಲ್ಲಿ ಬಲಗೊಂಡನು. ಅವನ ದೇವರಾದ ಕರ್ತನು ಅವನ ಸಂಗಡ ಇದ್ದು ಅವನನ್ನು ಅಧಿಕವಾಗಿ ಹೆಚ್ಚಿಸಿದನು.

1. Solomon son of David established himself firmly over his kingdom, for the LORD his God was with him and made him exceedingly great.

2. ಸೊಲೊಮೋ ನನು ಸಮಸ್ತ ಇಸ್ರಾಯೇಲ್ಯರೊಡನೆಯೂ ಸಹಸ್ರ ಶತಾಧಿಪತಿಗಳೊಡನೆಯೂ ನ್ಯಾಯಾಧಿಪತಿಗಳೊ ಡನೆಯೂ ಪ್ರಧಾನ ಪಿತೃಗಳೊಡನೆಯೂ ಇಸ್ರಾಯೇಲಿನಲ್ಲಿರುವ ಸಮಸ್ತ ಪ್ರಭುಗಳೊಡನೆಯೂ ಮಾತ ನಾಡಿದನು.

2. Then Solomon spoke to all Israel-to the commanders of thousands and commanders of hundreds, to the judges and to all the leaders in Israel, the heads of families-

3. ಹೀಗೆ ಅವನು ಅವನ ಸಂಗಡ ಸಮಸ್ತ ಸಭೆಯವರು ಗಿಬ್ಯೋನಿನಲ್ಲಿರುವ ಉನ್ನತ ಸ್ಥಳಕ್ಕೆ ಹೋದರು. ಕರ್ತನ ಸೇವಕನಾದ ಮೋಶೆಯು ಅರಣ್ಯ ದಲ್ಲಿ ಮಾಡಿದ ದೇವರ ಸಭೆಯ ಗುಡಾರವು ಅಲ್ಲಿತ್ತು.

3. and Solomon and the whole assembly went to the high place at Gibeon, for God's Tent of Meeting was there, which Moses the LORD's servant had made in the desert.

4. ದಾವೀದನು ಕರ್ತನ ಮಂಜೂಷವನ್ನು ಕಿರ್ಯತ್ಯಾ ರೀಮಿನಿಂದ ತಾನು ಅದಕ್ಕೊಸ್ಕರ ಸಿದ್ಧಮಾಡಿದ ಸ್ಥಳಕ್ಕೆ ತೆಗೆದುಕೊಂಡು ಬಂದಿದ್ದನು. ಯಾಕಂದರೆ ಅವನು ಯೆರೂಸಲೇಮಿನಲ್ಲಿ ಅದಕ್ಕೋಸ್ಕರ ಡೇರೆಯನ್ನು ಹಾಕಿ ಸಿದ್ದನು.

4. Now David had brought up the ark of God from Kiriath Jearim to the place he had prepared for it, because he had pitched a tent for it in Jerusalem.

5. ಇದಲ್ಲದೆ ಹೂರನ ಮಗನಾದ ಊರೀ ಯನ ಮಗನಾದ ಬೆಚಲೇಲನು ಮಾಡಿದ ತಾಮ್ರದ ಬಲಿಪೀಠವನ್ನು ಕರ್ತನ ಗುಡಾರದ ಮುಂದೆ ಇಟ್ಟನು. ಸೊಲೊಮೋನನೂ ಸಭೆಯೂ ಅದರ ಮುಂದೆ ವಿಚಾರಿಸುತ್ತಿದ್ದರು.

5. But the bronze altar that Bezalel son of Uri, the son of Hur, had made was in Gibeon in front of the tabernacle of the LORD; so Solomon and the assembly inquired of him there.

6. ಆಗ ಸೊಲೊಮೋನನು ಸಭೆಯ ಗುಡಾರದ ಬಳಿಯಲ್ಲಿ ಕರ್ತನ ಮುಂದೆ ಇರುವ ತಾಮ್ರಪೀಠದ ಬಳಿಗೆ ಹೋಗಿ ಅದರ ಮೇಲೆ ಸಹಸ್ರ ದಹನಬಲಿಗಳನ್ನು ಅರ್ಪಿಸಿದನು.

6. Solomon went up to the bronze altar before the LORD in the Tent of Meeting and offered a thousand burnt offerings on it.

7. ಅದೇ ರಾತ್ರಿಯಲ್ಲಿ ದೇವರು ಸೊಲೊಮೋನನಿಗೆ ಕಾಣಿಸಿಕೊಂಡು--ನಾನು ನಿನಗೆ ಕೊಡಬೇಕಾದದ್ದನ್ನು ಕೇಳಿಕೋ ಅಂದನು.

7. That night God appeared to Solomon and said to him, "Ask for whatever you want me to give you."

8. ಆಗ ಸೊಲೊಮೋನನು ದೇವ ರಿಗೆ--ನೀನು ನನ್ನ ತಂದೆಯಾದ ದಾವೀದನಿಗೆ ಬಹು ಕೃಪೆಯನ್ನು ತೋರಿಸಿ ಅವನಿಗೆ ಬದಲಾಗಿ ನಾನು ಆಳುವಂತೆ ಮಾಡಿದಿ.

8. Solomon answered God, "You have shown great kindness to David my father and have made me king in his place.

9. ಈಗ ಕರ್ತನಾದ ದೇವರೇ, ನನ್ನ ತಂದೆಯಾದ ದಾವೀದನಿಗೆ ನೀನು ಮಾಡಿದ ವಾಗ್ದಾನವು ಸ್ಥಾಪಿತವಾಗಲಿ, ಲೆಕ್ಕದಲ್ಲಿ ಧೂಳಿಯ ಹಾಗೆ ಹೆಚ್ಚಾಗಿರುವ ಜನರ ಮೇಲೆ ನನ್ನನ್ನು ಅರಸನಾಗ ಮಾಡಿದಿ.

9. Now, LORD God, let your promise to my father David be confirmed, for you have made me king over a people who are as numerous as the dust of the earth.

10. ನಾನು ಈ ಜನರ ಮುಂದೆ ಹೊರಡುವ ಹಾಗೆಯೂ ಬರುವ ಹಾಗೆಯೂ ನನಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡು. ಈ ನಿನ್ನ ಮಹಾಜನಕ್ಕೆ ನ್ಯಾಯ ತೀರಿಸತಕ್ಕವನು ಯಾರು ಅಂದನು.

10. Give me wisdom and knowledge, that I may lead this people, for who is able to govern this great people of yours?"

11. ಆಗ ದೇವರು ಸೊಲೊಮೋನನಿಗೆ--ಇದು ನಿನ್ನ ಹೃದಯ ದಲ್ಲಿ ಇದ್ದದರಿಂದಲೂ ಐಶ್ವರ್ಯವನ್ನೂ ಸ್ಥಿತಿಯನ್ನೂ ಘನವನ್ನೂ ನಿನ್ನ ಶತ್ರುಗಳ ಪ್ರಾಣವನ್ನೂ ಹೆಚ್ಚಾದ ದಿವಸಗಳನ್ನೂ ನೀನು ಕೇಳದೆ ನಾನು ಯಾರ ಮೇಲೆ ನಿನ್ನನ್ನು ಅರಸನಾಗಿ ಮಾಡಿದೆನೋ ಆ ನನ್ನ ಜನರಿಗೆ ನ್ಯಾಯ ತೀರಿಸುವ ಹಾಗೆ ಜ್ಞಾನವನ್ನೂ ತಿಳುವಳಿಕೆ ಯನ್ನೂ ನೀನು ಕೇಳಿದ್ದರಿಂದ ಅವು ನಿನಗೆ ಕೊಡ ಲ್ಪಟ್ಟವು.

11. God said to Solomon, "Since this is your heart's desire and you have not asked for wealth, riches or honor, nor for the death of your enemies, and since you have not asked for a long life but for wisdom and knowledge to govern my people over whom I have made you king,

12. ಇದಲ್ಲದೆ ನಿನಗಿಂತ ಮುಂಚೆ ಇದ್ದ ಅರಸುಗಳಲ್ಲಿ ಯಾರಿಗೂ ಇಲ್ಲದಂಥ ನಿನ್ನ ತರುವಾಯ ಯಾರಿಗೂ ಇರದಂಥ ಐಶ್ವರ್ಯವನ್ನೂ ಸ್ಥಿತಿಯನ್ನೂ ಘನವನ್ನೂ ಕೊಡುವೆನು ಅಂದನು.

12. therefore wisdom and knowledge will be given you. And I will also give you wealth, riches and honor, such as no king who was before you ever had and none after you will have."

13. ತರುವಾಯ ಸೊಲೊಮೋನನು ಸಭೆಯ ಗುಡಾರವನ್ನು ಬಿಟ್ಟು ಗಿಬ್ಯೋನಿನಲ್ಲಿರುವ ಉನ್ನತ ಸ್ಥಳದಿಂದ ಯೆರೂಸ ಲೇಮಿಗೆ ಬಂದು ಇಸ್ರಾಯೇಲನ್ನು ಆಳಿದನು.

13. Then Solomon went to Jerusalem from the high place at Gibeon, from before the Tent of Meeting. And he reigned over Israel.

14. ಸೊಲೊಮೋನನು ರಥಗಳನ್ನೂ ರಾಹುತರನ್ನೂ ಕೂಡಿಸಿದನು. ಅವನ ರಥಗಳು ಸಾವಿರದ ನಾನೂರು ರಾಹುತರು ಹನ್ನೆರಡು ಸಾವಿರ, ಇವರನ್ನು ರಥದ ಪಟ್ಟಣಗಳಲ್ಲಿಯೂ ಯೆರೂಸಲೇಮಿನಲ್ಲಿ ಅರಸನ ಬಳಿಯಲ್ಲಿಯೂ ಇರಿಸಿದನು.

14. Solomon accumulated chariots and horses; he had fourteen hundred chariots and twelve thousand horses, which he kept in the chariot cities and also with him in Jerusalem.

15. ಅರಸನು ಯೆರೂ ಸಲೇಮಿನಲ್ಲಿ ಬೆಳ್ಳಿಬಂಗಾರವನ್ನು ಕಲ್ಲುಗಳ ಹಾಗೆಯೂ ದೇವದಾರು ಮರಗಳನ್ನು ತಗ್ಗಿನಲ್ಲಿರುವ ಆಲದ ಮರ ಗಳ ಹಾಗೆಯೂ ಮಾಡಿದನು.

15. The king made silver and gold as common in Jerusalem as stones, and cedar as plentiful as sycamore-fig trees in the foothills.

16. ಇದಲ್ಲದೆ ಸೊಲೊ ಮೋನನಿಗೋಸ್ಕರ ಐಗುಪ್ತದಿಂದ ಕುದುರೆಗಳೂ ಸಣ ಬಿನ ನೂಲೂ ತರಲ್ಪಟ್ಟವು; ಅರಸನ ವರ್ತಕರು ಈ ಸಣಬಿನ ನೂಲನ್ನು ಕ್ರಯಕ್ಕೆ ತೆಗೆದುಕೊಂಡರು.ಹಾಗೆಯೇ ಐಗುಪ್ತದಿಂದ ಒಂದು ರಥಕ್ಕೆ ಆರು ನೂರು ಬೆಳ್ಳಿ ಶೇಕೆಲುಗಳ ಕ್ರಯವಾಗಿ ತಕ್ಕೊಂಡರು. ಒಂದು ಕುದುರೆಗೆ ನೂರೈವತ್ತು ಬೆಳ್ಳಿ ಶೇಕೆಲುಗಳ ಕ್ರಯವಾಗಿ ತರಿಸಿದರು. ಈ ಪ್ರಕಾರ ಹಿತ್ತಿಯರ ಅರಸುಗಳೆಲ್ಲರೂ ಅರಾಮಿನ ಅರಸುಗಳೆಲ್ಲರೂ ಅವರ ಮೂಲಕವಾಗಿ ತರಿಸಿಕೊಂಡರು.

16. Solomon's horses were imported from Egypt and from Kue - the royal merchants purchased them from Kue.

17. ಹಾಗೆಯೇ ಐಗುಪ್ತದಿಂದ ಒಂದು ರಥಕ್ಕೆ ಆರು ನೂರು ಬೆಳ್ಳಿ ಶೇಕೆಲುಗಳ ಕ್ರಯವಾಗಿ ತಕ್ಕೊಂಡರು. ಒಂದು ಕುದುರೆಗೆ ನೂರೈವತ್ತು ಬೆಳ್ಳಿ ಶೇಕೆಲುಗಳ ಕ್ರಯವಾಗಿ ತರಿಸಿದರು. ಈ ಪ್ರಕಾರ ಹಿತ್ತಿಯರ ಅರಸುಗಳೆಲ್ಲರೂ ಅರಾಮಿನ ಅರಸುಗಳೆಲ್ಲರೂ ಅವರ ಮೂಲಕವಾಗಿ ತರಿಸಿಕೊಂಡರು.

17. They imported a chariot from Egypt for six hundred shekels of silver, and a horse for a hundred and fifty. They also exported them to all the kings of the Hittites and of the Arameans.





Why do ads appear in this Website?

×