Verse

Menu:

ಪವಿತ್ರ ಬೈಬಲ್ : Kannada Bible (ßeta)  

Malayalam - മലയാളം Hindi - हिंदी Tamil - தமிழ் Kannada - ಕನ್ನಡ Telugu - తెలుగు 


Can't Read Kannada Words? Download Unicode Fonts.

Press CTRL + D To Bookmark This Page..:)

ಎಜ್ರನು: ಅಧ್ಯಾಯ 1

 
Custom Search

1. ಯೆರೆವಿಾಯನ ಮುಖಾಂತರ ಕರ್ತನು ಹೇಳಿದ ವಾಕ್ಯವು ಈಡೇರುವ ಹಾಗೆ ಪಾರಸಿಯ ಅರಸನಾದ ಕೋರೆಷನ ಮೊದಲನೇ ವರುಷದಲ್ಲಿ ಕರ್ತನು ಪಾರಸಿಯ ಅರಸನಾದ ಕೋರೆಷನ ಆತ್ಮವನ್ನು ಪ್ರೇರೇಪಿಸಿದ್ದರಿಂದ ಅವನು ತನ್ನ ರಾಜ್ಯದಲ್ಲಿ ಎಲ್ಲೆಲ್ಲಿಯೂ ಸಾರೋಣದಿಂದಲೂ ಬರಹದಿಂದಲೂ ಹೇಳಿದ್ದೇನಂದರೆ--

1. In the first year of Cyrus king of Persia, in order to fulfill the word of the LORD spoken by Jeremiah, the LORD moved the heart of Cyrus king of Persia to make a proclamation throughout his realm and to put it in writing:

2. ಪಾರಸಿಯ ಅರಸನಾದ ಕೋರೆಷನು ಹೀಗೆ ಹೇಳುತ್ತಾನೆ--ಪರಲೋಕದ ದೇವರಾಗಿರುವ ಕರ್ತನು ಭೂಮಿಯ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾನೆ; ಆತನು ಯೆಹೂದ ದಲ್ಲಿರುವ ಯೆರೂಸಲೇಮಿನಲ್ಲಿ ತನಗೆ ಮನೆಯನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾನೆ.

2. "This is what Cyrus king of Persia says: "'The LORD, the God of heaven, has given me all the kingdoms of the earth and he has appointed me to build a temple for him at Jerusalem in Judah.

3. ಆತನ ಸಮಸ್ತ ಜನರಾದ ನಿಮ್ಮೊಳಗೆ ಯಾರಿದ್ದೀರಿ? ಅವನ ಸಂಗಡ ಅವನ ದೇವರು ಇರಲಿ. ಅವನು ಯೆಹೂದದಲ್ಲಿ ರುವ ಯೆರೂಸಲೇಮಿಗೆ ಹೋಗಲಿ. ಯೆರೂಸಲೇಮಿನಲ್ಲಿರುವ ಇಸ್ರಾಯೇಲಿನ ದೇವರಾದ ಕರ್ತನ ಆಲಯವನ್ನು ಕಟ್ಟಲಿ (ಆತನೇ ದೇವರು).

3. Anyone of his people among you-may his God be with him, and let him go up to Jerusalem in Judah and build the temple of the LORD, the God of Israel, the God who is in Jerusalem.

4. ಇದಲ್ಲದೆ ಯಾವ ಸ್ಥಳದಲ್ಲಾದರೂ ಯಾವನಾದರೂ ಪರದೇಶಸ್ಥ ನಾಗಿ ಉಳಿದಿದ್ದರೆ ಅವನ ಸ್ಥಳದ ಮನುಷ್ಯರು ಯೆರೂ ಸಲೇಮಿನಲ್ಲಿರುವ ದೇವರ ಆಲಯಕ್ಕೆ ಕೊಡುವ ಉಚಿತವಾದ ಕಾಣಿಕೆ ಅಲ್ಲದೆ ಅವನಿಗೆ ಬೆಳ್ಳಿಯಿಂದ ಲೂ ಬಂಗಾರದಿಂದಲೂ ವಸ್ತುಗಳಿಂದಲೂ ಪಶುಗ ಳಿಂದಲೂ ಸಹಾಯಮಾಡಲಿ ಅಂದನು.

4. And the people of any place where survivors may now be living are to provide him with silver and gold, with goods and livestock, and with freewill offerings for the temple of God in Jerusalem.'"

5. ಆಗ ಯೆಹೂದ, ಬೆನ್ಯಾವಿಾನ್‌ ತಂದೆಗಳ ಮುಖ್ಯ ಸ್ಥರೂ ಯಾಜಕರೂ ಲೇವಿಯರೂ ಯೆರೂಸಲೇಮಿನ ಲ್ಲಿರುವ ಕರ್ತನ ಆಲಯವನ್ನು ಕಟ್ಟುವದಕ್ಕೆ ಹೋಗಲು ಕರ್ತನಿಂದ ಪ್ರೇರೇಪಿಸಲ್ಪಟ್ಟವರೆಲ್ಲರೂ ಎದ್ದರು.

5. Then the family heads of Judah and Benjamin, and the priests and Levites-everyone whose heart God had moved-prepared to go up and build the house of the LORD in Jerusalem.

6. ಅವರ ಸುತ್ತಲಿರುವವರೆಲ್ಲರೂ ಮನಃ ಪೂರ್ವಕವಾದ ಎಲ್ಲಾ ಕಾಣಿಕೆಗಳ ಹೊರತಾಗಿ ಬೆಳ್ಳಿಯ ಸಾಮಾನು ಗಳಿಂದಲೂ ಬಂಗಾರದಿಂದಲೂ ವಸ್ತುಗಳಿಂದಲೂ ಪಶುಗಳಿಂದಲೂ ಬೆಲೆಯುಳ್ಳವುಗಳಿಂದಲೂ ಅವರಿಗೆ ಸಹಾಯ ಮಾಡಿದರು.

6. All their neighbors assisted them with articles of silver and gold, with goods and livestock, and with valuable gifts, in addition to all the freewill offerings.

7. ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ತಂದು ತನ್ನ ದೇವರುಗಳ ಮನೆಯಲ್ಲಿ ಇರಿಸಿದ್ದ ಕರ್ತನ ಆಲಯದ ಸಾಮಾನು ಗಳನ್ನು ಅರಸನಾದ ಕೋರೆಷನು ತರಿಸಿದನು.

7. Moreover, King Cyrus brought out the articles belonging to the temple of the LORD, which Nebuchadnezzar had carried away from Jerusalem and had placed in the temple of his god.

8. ಅವು ಗಳನ್ನು ಪಾರಸಿಯ ಅರಸನಾದ ಕೋರೆಷನು ಬೊಕ್ಕಸ ದವನಾದ ಮಿತ್ರದಾತನ ಕೈಯಿಂದ ತರಿಸಿ ಯೆಹೂದದ ಪ್ರಭುವಾದ ಶೆಷ್ಬಚ್ಚರನಿಗೆ ಎಣಿಸಿ ಕೊಟ್ಟನು.

8. Cyrus king of Persia had them brought by Mithredath the treasurer, who counted them out to Sheshbazzar the prince of Judah.

9. ಅವುಗಳ ಲೆಕ್ಕವೇನಂದರೆ--ಮೂವತ್ತು ಬಂಗಾರದ ತಟ್ಟೆಗಳು, ಸಾವಿರ ಬೆಳ್ಳಿಯ ತಟ್ಟೆಗಳು, ಇಪ್ಪತ್ತೊಂಭತ್ತು ಕತ್ತಿಗಳು,

9. This was the inventory: gold dishes 30 silver dishes 1,000 silver pans 29

10. ಮೂವತ್ತು ಬಂಗಾರದ ದೊಡ್ಡ ಬಟ್ಟಲುಗಳು, ನಾನೂರ ಹತ್ತು ಬೆಳ್ಳಿಯ ಬಟ್ಟಲುಗಳು, ಸಾವಿರ ಬೇರೆ ಸಾಮಾನುಗಳು. ಬಂಗಾರ ಬೆಳ್ಳಿಯ ಸಾಮಾನುಗಳೆಲ್ಲಾ ಐದು ಸಾವಿರದ ನಾನೂರು ಇದ್ದವು.ಇವುಗಳನ್ನೆಲ್ಲಾ ಬಾಬೆಲಿನಿಂದ ಯೆರೂಸಲೇಮಿಗೆ ಸೆರೆಯವರ ಸಂಗಡ ಶೆಷ್ಬಚ್ಚರನು ತಕ್ಕೊಂಡು ಹೋದನು.

10. gold bowls 30 matching silver bowls 410 other articles 1,000

11. ಇವುಗಳನ್ನೆಲ್ಲಾ ಬಾಬೆಲಿನಿಂದ ಯೆರೂಸಲೇಮಿಗೆ ಸೆರೆಯವರ ಸಂಗಡ ಶೆಷ್ಬಚ್ಚರನು ತಕ್ಕೊಂಡು ಹೋದನು.

11. In all, there were 5,400 articles of gold and of silver. Sheshbazzar brought all these along when the exiles came up from Babylon to Jerusalem.

Why do ads appear in this Website?

×