Verse

Menu:

ಪವಿತ್ರ ಬೈಬಲ್ : Kannada Bible (ßeta)  

Malayalam - മലയാളം Hindi - हिंदी Tamil - தமிழ் Kannada - ಕನ್ನಡ Telugu - తెలుగు 


Can't Read Kannada Words? Download Unicode Fonts.

Press CTRL + D To Bookmark This Page..:)

ಪ್ರಸಂಗಿ: ಅಧ್ಯಾಯ 1

 
Custom Search

1. ದಾವೀದನ ಮಗನೂ ಯೆರೂಸಲೇಮಿನಲ್ಲಿ ಅರಸನೂ ಆಗಿದ್ದ ಪ್ರಸಂಗಿಯ ಮಾತುಗಳು.

1. The words of the Teacher, son of David, king in Jerusalem:

2. ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥಗಳಲ್ಲಿ ವ್ಯರ್ಥ ಎಂದು ಪ್ರಸಂಗಿ ಹೇಳುತ್ತಾನೆ; ಎಲ್ಲವೂ ವ್ಯರ್ಥ.

2. "Meaningless! Meaningless!" says the Teacher. "Utterly meaningless! Everything is meaningless."

3. ಸೂರ್ಯನ ಕೆಳಗೆ ಮನುಷ್ಯನು ಪಡುವ ಎಲ್ಲಾ ಪ್ರಯಾಸದಲ್ಲಿ ಅವನಿಗೆ ಲಾಭವೇನು?

3. What does man gain from all his labor at which he toils under the sun?

4. ಒಂದು ಸಂತಾನವು ಗತಿಸುತ್ತದೆ, ಮತ್ತೊಂದು ಸಂತಾನವು ಬರುತ್ತದೆ; ಆದರೆ ಭೂಮಿಯು ಎಂದಿಗೂ ನಿಲ್ಲುತ್ತದೆ.

4. Generations come and generations go, but the earth remains forever.

5. ಸೂರ್ಯನು ಏರುತ್ತಾನೆ, ಸೂರ್ಯನು ಇಳಿಯುತ್ತಾನೆ; ತಾನು ಏರಿದ ಸ್ಥಳಕ್ಕೆ ಆತುರಪಡುತ್ತಾನೆ.

5. The sun rises and the sun sets, and hurries back to where it rises.

6. ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ, ಉತ್ತರದ ಕಡೆಗೆ ತಿರುಗುತ್ತದೆ; ಅದು ಬಿಡದೆ ಗುಂಡಾಗಿ ಸುತ್ತುತ್ತದೆ; ಆ ಗಾಳಿಯು ತನ್ನ ಸುತ್ತಳತೆಗಳ ಪ್ರಕಾರ ಹಿಂದಿರು ಗುತ್ತದೆ.

6. The wind blows to the south and turns to the north; round and round it goes, ever returning on its course.

7. ನದಿಗಳೆಲ್ಲಾ ಹರಿದು ಸಮುದ್ರಕ್ಕೆ ಹೋಗುತ್ತವೆ, ಆದರೂ ಸಮುದ್ರವು ತುಂಬುವದಿಲ್ಲ; ನದಿ ಗಳು ಎಲ್ಲಿಂದ ಬಂದಿವೆಯೋ ಆ ಸ್ಥಳಕ್ಕೆ ಅವು ಹಿಂತಿರು ಗುತ್ತವೆ.

7. All streams flow into the sea, yet the sea is never full. To the place the streams come from, there they return again.

8. ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿ ಯವೆ; ಅದನ್ನು ಮನುಷ್ಯನು ವಿವರಿಸಲಾರನು; ನೋಡುವದರಿಂದ ಕಣ್ಣು ತೃಪ್ತಿಗೊಳ್ಳದು. ಇಲ್ಲವೆ ಕೇಳು ವದರಿಂದ ಕಿವಿಯು ದಣಿಯದು.

8. All things are wearisome, more than one can say. The eye never has enough of seeing, nor the ear its fill of hearing.

9. ಇದ್ದದ್ದೇ ಇರು ವದು, ನಡೆದದ್ದೇ ನಡೆಯುವದು; ಸೂರ್ಯನ ಕೆಳಗೆ ಹೊಸದಾದದ್ದು ಯಾವದೂ ಇಲ್ಲ.

9. What has been will be again, what has been done will be done again; there is nothing new under the sun.

10. ನೋಡು, ಇದು ಹೊಸದು ಎಂದು ಯಾವ ವಿಷಯವಾಗಿ ಹೇಳ ಬಹುದೋ ಅದು ನಮಗಿಂತ ಮುಂಚೆ ಪುರಾತನ ಕಾಲದಿಂದ ಇದ್ದದ್ದೇ.

10. Is there anything of which one can say, "Look! This is something new"? It was here already, long ago; it was here before our time.

11. ಮೊದಲಿನ ಸಂಗತಿಗಳ ಜ್ಞಾಪ ಕವು ಇಲ್ಲ; ಮುಂದಿನ ಸಂಗತಿಗಳ ಜ್ಞಾಪಕವು ಅವುಗಳ ಮುಂದಿನವರಿಗೆ ಇರುವದಿಲ್ಲ.

11. There is no remembrance of men of old, and even those who are yet to come will not be remembered by those who follow.

12. ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲ್ಯರ ಮೇಲೆ ಅರಸನಾಗಿದ್ದೆನು.

12. I, the Teacher, was king over Israel in Jerusalem.

13. ಆಕಾಶದ ಕೆಳಗೆ ನಡೆಯುವ ಎಲ್ಲವುಗಳ ವಿಷಯವಾಗಿ ಜ್ಞಾನ ದಿಂದ ವಿಚಾರಿಸಿ ವಿಮರ್ಶಿಸುವದಕ್ಕೆ ನಾನು ನನ್ನ ಮನಸ್ಸು ಇಟ್ಟೆನು; ಇದರ ವಿಷಯವಾದ ಪ್ರಯಾಸವು ಮನಸ್ಸಿನಲ್ಲಿ ಯೋಚಿಸುವಂತೆ ದೇವರು ಮನುಷ್ಯ ಮಕ್ಕಳಿಗೆ ಈ ಕಷ್ಟಕರವಾದ ಪ್ರಯಾಸವನ್ನು ಕೊಟ್ಟಿ ದ್ದಾನೆ.

13. I devoted myself to study and to explore by wisdom all that is done under heaven. What a heavy burden God has laid on men!

14. ಸೂರ್ಯನ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ನಾನು ನೋಡಿದ್ದೇನೆ; ಇಗೋ, ಎಲ್ಲವು ವ್ಯರ್ಥವೂ ಮನಸ್ಸಿಗೆ ಆಯಾಸವೂ ಆಗಿವೆ.

14. I have seen all the things that are done under the sun; all of them are meaningless, a chasing after the wind.

15. ವಕ್ರ ವಾದದ್ದು ಸರಿಮಾಡುವದಕ್ಕೆ ಆಗುವದಿಲ್ಲ; ಇಲ್ಲದ್ದನ್ನು ಲೆಕ್ಕಿಸುವದು ಅಸಾಧ್ಯ.

15. What is twisted cannot be straightened; what is lacking cannot be counted.

16. ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಾ--ಇಗೋ, ನಾನು ದೊಡ್ಡ ಸ್ಥಾನಕ್ಕೆ ಬಂದಿದ್ದೇನೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದವರೆಲ್ಲರಿಗಿಂತ ನಾನು ಜ್ಞಾನವನ್ನು ಸಂಪಾದಿಸಿದ್ದೇನೆ. ಹೌದು, ಜ್ಞಾನದ ತಿಳುವಳಿಕೆಯ ದೊಡ್ಡ ಅನುಭವವು ನನ್ನ ಹೃದಯಕ್ಕೆ ಆಯಿತು ಎಂದು ಹೇಳಿದೆನು.

16. I thought to myself, "Look, I have grown and increased in wisdom more than anyone who has ruled over Jerusalem before me; I have experienced much of wisdom and knowledge."

17. ಜ್ಞಾನ ವನ್ನೂ ಹುಚ್ಚುತನವನ್ನೂ ಬುದ್ಧಿಹೀನತೆಯನ್ನೂ ತಿಳು ಕೊಳ್ಳುವಂತೆ ನಾನು ಮನಸ್ಸಿಟ್ಟೆನು; ಇದು ಸಹ ಮನಸ್ಸಿಗೆ ಆಯಾಸವೆಂದು ನಾನು ಅರಿತುಕೊಂಡೆನು.ಬಹು ಜ್ಞಾನವಿದ್ದಲ್ಲಿ ದುಃಖ; ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳು ವವನು ತನ್ನ ವ್ಯಥೆಯನ್ನು ಹೆಚ್ಚಿಸಿಕೊಳ್ಳುತ್ತಾನೆ.

17. Then I applied myself to the understanding of wisdom, and also of madness and folly, but I learned that this, too, is a chasing after the wind.

18. ಬಹು ಜ್ಞಾನವಿದ್ದಲ್ಲಿ ದುಃಖ; ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳು ವವನು ತನ್ನ ವ್ಯಥೆಯನ್ನು ಹೆಚ್ಚಿಸಿಕೊಳ್ಳುತ್ತಾನೆ.

18. For with much wisdom comes much sorrow; the more knowledge, the more grief.





Why do ads appear in this Website?

×