Verse

Menu:

ಪವಿತ್ರ ಬೈಬಲ್ : Kannada Bible (ßeta)  

Malayalam - മലയാളം Hindi - हिंदी Tamil - தமிழ் Kannada - ಕನ್ನಡ Telugu - తెలుగు 


Can't Read Kannada Words? Download Unicode Fonts.

Press CTRL + D To Bookmark This Page..:)

ಆಮೋಸ: ಅಧ್ಯಾಯ 1

 
Custom Search

1. ತೆಕೋವದ ಕುರುಬರಲಿದ್ದ ಆಮೋಸನು ಯೆಹೂದದ ಅರಸನಾದ ಉಜ್ಜೀಯನ ದಿನಗಳಲ್ಲಿಯೂ ಇಸ್ರಾಯೇಲಿನ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನ ದಿನಗಳ ಲ್ಲಿಯೂ ಭೂಕಂಪಕ್ಕೆ ಎರಡು ವರುಷಗಳ ಮುಂಚೆ ಇಸ್ರಾಯೇಲಿನ ವಿಷಯವಾಗಿ ನೋಡಿದ ವಾಕ್ಯಗಳು.

1. The words of Amos, one of the shepherds of Tekoa-what he saw concerning Israel two years before the earthquake, when Uzziah was king of Judah and Jeroboam son of Jehoash was king of Israel.

2. ಅವನು ಹೇಳಿದ್ದೇನಂದರೆ--ಕರ್ತನು ಚೀಯೋನಿ ನಿಂದ ಘರ್ಜಿಸಿ ಯೆರೂಸಲೇಮಿನಿಂದ ತನ್ನ ಧ್ವನಿಗೈಯು ವನು; ಕುರುಬರ ವಾಸದ ಸ್ಥಳಗಳು ಗೋಳಾಡುತ್ತವೆ ಮತ್ತು ಕರ್ಮೆಲಿನ ತುದಿಯು ಒಣಗಿ ಹೋಗುತ್ತದೆ ಎಂದು ಹೇಳುತ್ತಾನೆ.

2. He said: "The LORD roars from Zion and thunders from Jerusalem; the pastures of the shepherds dry up, and the top of Carmel withers."

3. ಕರ್ತನು ಹೀಗೆ ಹೇಳುತ್ತಾನೆ--ದಮಸ್ಕದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ನಾನು ಅವರನ್ನು ದಂಡಿಸದೆ ಹಿಂತಿರುಗುವದಿಲ್ಲ; ಅವರು ಕಬ್ಬಿಣದ ಆಯುಧಗಳಿಂದ ಗಿಲ್ಯಾದನ್ನು ಬಡಿದಿರುವರು.

3. This is what the LORD says: "For three sins of Damascus, even for four, I will not turn back my wrath. Because she threshed Gilead with sledges having iron teeth,

4. ಆದರೆ ನಾನು ಹಜಾಯೇಲನ ಮನೆಯೊಳಗೆ ಬೆಂಕಿಯನ್ನು ಕಳುಹಿಸುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ನುಂಗಿಬಿಡುವದು.

4. I will send fire upon the house of Hazael that will consume the fortresses of Ben-Hadad.

5. ನಾನು ದಮಸ್ಕದ ಅಡ್ಡ ದಂಡೆ ಯನ್ನು ಸಹ ಮುರಿಯುವೆನು; ಆವೆನ್‌ ತಗ್ಗಿನಿಂದ ನಿವಾಸಿಯನ್ನೂ ಎದೆನಿನ ಮನೆಯಿಂದ ರಾಜದಂಡ ಹಿಡಿಯುವನನ್ನೂ ಕಡಿದುಬಿಡುವೆನು; ಸಿರಿಯಾದ ಜನರು ಸೆರೆಯಾಗಿ ಕೀರಿಗೆ ಹೋಗುವರೆಂದು ಕರ್ತನು ಹೇಳುತ್ತಾನೆ.

5. I will break down the gate of Damascus; I will destroy the king who is in the Valley of Aven and the one who holds the scepter in Beth Eden. The people of Aram will go into exile to Kir," says the LORD.

6. ಕರ್ತನು ಹೀಗೆ ಹೇಳುತ್ತಾನೆ--ಗಾಜದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ನಾನು ಅದರ ದಂಡನೆಯ ಕಡೆಯಿಂದ ತಿರುಗಿಸಿಬಿಡುವದಿಲ್ಲ; ಅವ ರನ್ನು ಸೆರೆಗೆ ಒಪ್ಪಿಸುವದಕ್ಕಾಗಿ ಎದೋಮಿಗೆ ಎಲ್ಲಾ ಸೆರೆಯವರನ್ನು ಕರೆತಂದರು.

6. This is what the LORD says: "For three sins of Gaza, even for four, I will not turn back my wrath. Because she took captive whole communities and sold them to Edom,

7. ಆದರೆ ನಾನು ಗಾಜದ ಗೋಡೆಯಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ; ಅದು ಅವರ ಅರಮನೆಗಳನ್ನು ನುಂಗಿಬಿಡುವದು.

7. I will send fire upon the walls of Gaza that will consume her fortresses.

8. ಅಷ್ಡೋ ದಿನಿಂದ ನಿವಾಸಿಯನ್ನು ಅಷ್ಕೆಲೋನಿನಿಂದ ರಾಜದಂಡ ಹಿಡಿಯುವವನನ್ನು ಕಡಿದುಬಿಟ್ಟು ನಾನು ಎಕ್ರೋನಿಗೆ ವಿರೋಧವಾಗಿ ನನ್ನ ಕೈಯನ್ನು ತಿರುಗಿಸುತ್ತೇನೆ. ಉಳಿದ ಫಿಲಿಪ್ಪಿಯರು ನಾಶವಾಗುವರೆಂದು ಕರ್ತನಾದ ದೇವರು ಹೇಳುತ್ತಾನೆ.

8. I will destroy the king of Ashdod and the one who holds the scepter in Ashkelon. I will turn my hand against Ekron, till the last of the Philistines is dead," says the Sovereign LORD.

9. ಕರ್ತನು ಹೀಗೆ ಹೇಳುತ್ತಾನೆ--ತೂರಿನ ಮೂರು ಮತ್ತು ನಾಲ್ಕರ ನಿಮಿತ್ತ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವದಿಲ್ಲ; ಅವರು ಸಹೋದರರ ಒಡಂಬ ಡಿಕೆಯನ್ನು ಜ್ಞಾಪಕಮಾಡಲಿಲ್ಲ; ಪೂರ್ಣ ಸೆರೆಯನ್ನು ಎದೋಮಿಗೆ ಒಪ್ಪಿಸಿಬಿಟ್ಟರು.

9. This is what the LORD says: "For three sins of Tyre, even for four, I will not turn back my wrath. Because she sold whole communities of captives to Edom, disregarding a treaty of brotherhood,

10. ಆದರೆ ನಾನು ತೂರಿನ ಗೋಡೆಯ ಮೇಲೆ ಬೆಂಕಿಯನ್ನು ಕಳುಹಿಸುವೆನು, ಅದು ಅಲ್ಲಿಯ ಅರಮನೆಗಳನ್ನು ನುಂಗಿಬಿಡುವದು.

10. I will send fire upon the walls of Tyre that will consume her fortresses."

11. ಕರ್ತನು ಹೀಗೆ ಹೇಳುತ್ತಾನೆ--ಎದೋಮಿನ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತವಾಗಿ ನಾನು ಅದರ ದಂಡನೆಯಿಂದ ತಪ್ಪಿಸುವದಿಲ್ಲ. ಅವನು ತನ್ನ ಎಲ್ಲಾ ಕನಿಕರಗಳನ್ನು ಬಿಸಾಡಿಬಿಟ್ಟು ತನ್ನ ಸಹೋ ದರನನ್ನು ಕತ್ತಿಯ ಸಹಿತ ಹಿಂಬಾಲಿಸಿದನು. ಅವನ ಕೋಪವು ನಿರಂತರವಾಗಿ ಹರಿಯುತ್ತಿತ್ತು; ತನ್ನ ರೌದ್ರ ವನ್ನು ನಿತ್ಯವಾಗಿ ಇಟ್ಟುಕೊಂಡನು.

11. This is what the LORD says: "For three sins of Edom, even for four, I will not turn back my wrath. Because he pursued his brother with a sword, stifling all compassion, because his anger raged continually and his fury flamed unchecked,

12. ಆದರೆ ನಾನು ತೇಮಾನಿನ ಮೇಲೆ ಬೆಂಕಿಯನ್ನು ಕಳುಹಿಸುವೆನು, ಅದು ಬೊಚ್ರದ ಅರಮನೆಗಳನ್ನು ನುಂಗಿಬಿಡುವದು.

12. I will send fire upon Teman that will consume the fortresses of Bozrah."

13. ಕರ್ತನು ಹೀಗೆ ಹೇಳುತ್ತಾನೆ--ಅಮ್ಮೋನಿನ ಮಕ್ಕಳ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ವಾಗಿ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವ ದಿಲ್ಲ; ತಮ್ಮ ಮೇರೆಯನ್ನು ವಿಸ್ತಾರ ಮಾಡುವದಕ್ಕಾಗಿ ಗಿಲ್ಯಾದಿನ ಗರ್ಭಿಣಿಯರನ್ನು ಸೀಳಿದ್ದಾರೆ.

13. This is what the LORD says: "For three sins of Ammon, even for four, I will not turn back {my wrath}. Because he ripped open the pregnant women of Gilead in order to extend his borders,

14. ಆದರೆ ನಾನು ರಬ್ಬದ ಗೋಡೆಯಲ್ಲಿ ಬೆಂಕಿಯನ್ನು ಹತ್ತಿಸುವೆನು; ಅದು ಯುದ್ಧದ ದಿನದಲ್ಲಿ ಆರ್ಭಟದ ಸಂಗಡವೂ ಬಿರುಗಾಳಿಯ ದಿನದಲ್ಲಿ ಸುಳಿಗಾಳಿಯ ಸಂಗಡವೂ ಅಲ್ಲಿಯ ಅರಮನೆಗಳನ್ನು ನುಂಗಿಬಿಡುವದು.ಅವರ ಅರಸನು ತಾನು ತನ್ನ ರಾಜಕುಮಾರರ ಸಂಗಡ ಸೆರೆಗೆ ಹೋಗುವನೆಂದು ಕರ್ತನು ಹೇಳುತ್ತಾನೆ.

14. I will set fire to the walls of Rabbah that will consume her fortresses amid war cries on the day of battle, amid violent winds on a stormy day.

15. ಅವರ ಅರಸನು ತಾನು ತನ್ನ ರಾಜಕುಮಾರರ ಸಂಗಡ ಸೆರೆಗೆ ಹೋಗುವನೆಂದು ಕರ್ತನು ಹೇಳುತ್ತಾನೆ.

15. Her king will go into exile, he and his officials together," says the LORD.





Why do ads appear in this Website?

×