Verse

Menu:

ಪವಿತ್ರ ಬೈಬಲ್ : Kannada Bible (ßeta)  

Malayalam - മലയാളം Hindi - हिंदी Tamil - தமிழ் Kannada - ಕನ್ನಡ Telugu - తెలుగు 


Can't Read Kannada Words? Download Unicode Fonts.

Press CTRL + D To Bookmark This Page..:)

ಯೋಹಾನನು: ಅಧ್ಯಾಯ 1

 
Custom Search

1. ಆದಿಯಲ್ಲಿ ವಾಕ್ಯವಿದ್ದನು; ಆ ವಾಕ್ಯವು ದೇವರೊಂದಿಗೆ ಇದ್ದನು; ಆ ವಾಕ್ಯವು ದೇವರಾಗಿದ್ದನು.

1. In the beginning was the Word, and the Word was with God, and the Word was God.

2. ಆತನೇ ಆದಿಯಲ್ಲಿ ದೇವರೊಂದಿಗೆ ಇದ್ದನು.

2. He was with God in the beginning.

3. ಎಲ್ಲವು ಆತನಿಂದ ಉಂಟಾಯಿತು; ಉಂಟಾದದ್ದರಲ್ಲಿ ಆತನಿಲ್ಲದೆ ಯಾವದೂ ಉಂಟಾಗ ಲಿಲ್ಲ.

3. Through him all things were made; without him nothing was made that has been made.

4. ಆತನಲ್ಲಿ ಜೀವವಿತ್ತು; ಆ ಜೀವವು ಮನುಷ್ಯ ರಿಗೆ ಬೆಳಕಾಗಿತ್ತು.

4. In him was life, and that life was the light of men.

5. ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ; ಆ ಕತ್ತಲು ಅದನ್ನು ಗ್ರಹಿಸಲಿಲ್ಲ.

5. The light shines in the darkness, but the darkness has not understood it.

6. ದೇವರಿಂದ ಕಳುಹಿ ಸಲ್ಪಟ್ಟ ಒಬ್ಬ ಮನುಷ್ಯನಿದ್ದನು; ಅವನ ಹೆಸರು ಯೋಹಾನನು.

6. There came a man who was sent from God; his name was John.

7. ಎಲ್ಲರೂ ತನ್ನ ಮೂಲಕವಾಗಿ ನಂಬುವಂತೆ ಅವನೇ ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡುವದಕ್ಕೆ ಸಾಕ್ಷಿಗಾಗಿ ಬಂದನು.

7. He came as a witness to testify concerning that light, so that through him all men might believe.

8. ಅವನು ಆ ಬೆಳಕಲ್ಲ. ಆದರೆ ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡು ವದಕ್ಕೆ ಕಳುಹಿಸಲ್ಪಟ್ಟನು.

8. He himself was not the light; he came only as a witness to the light.

9. ಲೋಕದಲ್ಲಿ ಬರುವ ಪ್ರತಿಯೊಬ್ಬ ಮನುಷ್ಯನಿಗೆ ಆತನು ಬೆಳಕನ್ನು ಕೊಡುವ ನಿಜವಾದ ಬೆಳಕಾಗಿದ್ದನು.

9. The true light that gives light to every man was coming into the world.

10. ಆತನು ಲೋಕದಲ್ಲಿ ಇದ್ದನು; ಲೋಕವು ಆತನಿಂದ ಉಂಟಾಯಿತು; ಲೋಕವು ಆತನನ್ನು ಅರಿಯಲಿಲ್ಲ.

10. He was in the world, and though the world was made through him, the world did not recognize him.

11. ಆತನು ತನ್ನ ಸ್ವಂತದವರ ಬಳಿಗೆ ಬಂದನು. ಆತನ ಸ್ವಂತದವರು ಆತನನ್ನು ಅಂಗೀಕರಿಸಲಿಲ್ಲ.

11. He came to that which was his own, but his own did not receive him.

12. ಆದರೆ ಯಾರಾರು ಆತನನ್ನು ಅಂಗೀಕರಿಸಿದರೋ ಅವರಿಗೆ ಅಂದರೆ ಆತನ ಹೆಸರಿನ ಮೇಲೆ ನಂಬಿಕೆಯಿಡುವವರಿಗೆ ದೇವರ ಪುತ್ರರಾಗುವ ಅಧಿಕಾರವನ್ನು ಆತನು ಕೊಟ್ಟನು.

12. Yet to all who received him, to those who believed in his name, he gave the right to become children of God--

13. ಇವರು ರಕ್ತದಿಂದಾಗಲಿ ಇಲ್ಲವೆ ಶರೀರದ ಇಚ್ಛೆಯಿಂದಾಗಲಿ ಇಲ್ಲವೆ ಮನುಷ್ಯನ ಇಚ್ಛೆಯಿಂದಾ ಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು.

13. children born not of natural descent, nor of human decision or a husband's will, but born of God.

14. ಇದಲ್ಲದೆ ಆ ವಾಕ್ಯವಾಗಿರುವಾತನು ಶರೀರಧಾರಿ ಯಾಗಿ ಕೃಪೆಯಿಂದಲೂ ಸತ್ಯದಿಂದಲೂ ತುಂಬಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. (ತಂದೆಯಿಂದ ಹುಟ್ಟಿದ ಒಬ್ಬನೇ ಮಗನ ಮಹಿಮೆಯಂತೆ ನಾವು ಆತನ ಮಹಿಮೆಯನ್ನು ನೋಡಿದೆವು).

14. The Word became flesh and made his dwelling among us. We have seen his glory, the glory of the One and Only, who came from the Father, full of grace and truth.

15. ಯೋಹಾನನು ಆತನ ವಿಷಯದಲ್ಲಿ ಸಾಕ್ಷಿ ಕೊಟ್ಟು--ನನ್ನ ಹಿಂದೆ ಬರುವಾತನು ನನಗಿಂತ ಮೊದಲೇ ಇದ್ದದರಿಂದ ನನಗಿಂತ ಮುಂದಿನವನು ಎಂದು ನಾನು ಹೇಳಿದಾತನು ಈತನೇ ಎಂದು ಕೂಗಿ ಹೇಳಿದನು.

15. John testifies concerning him. He cries out, saying, "This was he of whom I said, 'He who comes after me has surpassed me because he was before me.'"

16. ಆತನ ಸಂಪೂರ್ಣತೆಯೊಳಗಿಂದ ನಾವೆಲ್ಲರೂ ಕೃಪೆಗಾಗಿ ಕೃಪೆಯನ್ನು ಹೊಂದಿದೆವು.

16. From the fullness of his grace we have all received one blessing after another.

17. ನ್ಯಾಯಪ್ರಮಾಣವು ಮೋಶೆಯ ಮುಖಾಂತರ ವಾಗಿ ಕೊಡಲ್ಪಟ್ಟಿತು; ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರವಾಗಿ ಬಂದವು.

17. For the law was given through Moses; grace and truth came through Jesus Christ.

18. ಯಾವನೂ ಯಾವ ಕಾಲದಲ್ಲೂ ದೇವರನ್ನು ಕಂಡಿಲ್ಲ. ತಂದೆಯ ಎದೆಯಲ್ಲಿರುವ ಆ ಒಬ್ಬನೇ ಮಗ ನಾಗಿರುವಾತನು ಆತನನ್ನು ತಿಳಿಯಪಡಿಸಿದ್ದಾನೆ.

18. No one has ever seen God, but God the One and Only,, who is at the Father's side, has made him known.

19. ನೀನು ಯಾರು ಎಂದು ಅವನನ್ನು ಕೇಳುವದ ಕ್ಕಾಗಿ ಯೆಹೂದ್ಯರು ಯಾಜಕರನ್ನೂ ಲೇವಿಯರನ್ನೂ ಯೆರೂಸಲೇಮಿನಿಂದ ಕಳುಹಿಸಿದಾಗ ಯೋಹಾನನು ಕೊಟ್ಟ ಸಾಕ್ಷಿ ಇದೇ.

19. Now this was John's testimony when the Jews of Jerusalem sent priests and Levites to ask him who he was.

20. ಅವನು ಒಪ್ಪಿಕೊಂಡನು. ಅಲ್ಲಗಳೆಯಲಿಲ್ಲ; ಅವನು--ನಾನು ಕ್ರಿಸ್ತನಲ್ಲ ಎಂದು ಒಪ್ಪಿಕೊಂಡನು.

20. He did not fail to confess, but confessed freely, "I am not the Christ. "

21. ಅದಕ್ಕವರು--ಹಾಗಾದರೇನು? ನೀನು ಎಲೀಯನೋ ಎಂದು ಕೇಳಿದರು. ಅದಕ್ಕೆ ಅವನು--ನಾನಲ್ಲ ಅಂದನು. ಅವರು ನೀನು ಆ ಪ್ರವಾದಿಯೋ ಎಂದು ಕೇಳಿದ್ದಕ್ಕೆ ಅವನು--ಅಲ್ಲ ಎಂದು ಉತ್ತರಕೊಟ್ಟನು.

21. They asked him, "Then who are you? Are you Elijah?" He said, "I am not.Are you the Prophet?" He answered, "No."

22. ಆಗ ಅವರು ಅವ ನಿಗೆ--ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಹೇಳುವಂತೆ ನೀನು ನಿನ್ನ ವಿಷಯದಲ್ಲಿ ಏನು ಹೇಳುತ್ತೀ ಎಂದು ಕೇಳಿದರು.

22. Finally they said, "Who are you? Give us an answer to take back to those who sent us. What do you say about yourself?"

23. ಅವನು--ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ ಎಂದು ಅಡವಿ ಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂದು ಪ್ರವಾದಿ ಯಾದ ಯೆಶಾಯನು ಹೇಳಿದ ಶಬ್ದವೇ ನಾನು ಎಂದು ಉತ್ತರಕೊಟ್ಟನು.

23. John replied in the words of Isaiah the prophet, "I am the voice of one calling in the desert, 'Make straight the way for the Lord.'"

24. ಕಳುಹಿಸಲ್ಪಟ್ಟವರು ಫರಿಸಾಯರ ಕಡೆಯವರಾಗಿದ್ದರು.

24. Now some Pharisees who had been sent

25. ಅವರು ಅವನಿಗೆ--ನೀನು ಆ ಕ್ರಿಸ್ತನೂ ಎಲೀಯನೂ ಇಲ್ಲವೆ ಆ ಪ್ರವಾದಿಯೂ ಅಲ್ಲದಿದ್ದರೆ ಬಾಪ್ತಿಸ್ಮ ಮಾಡಿಸುವದು ಯಾಕೆ ಎಂದು ಕೇಳಿದರು.

25. questioned him, "Why then do you baptize if you are not the Christ, nor Elijah, nor the Prophet?"

26. ಯೋಹಾನನು ಅವರಿಗೆ ಪ್ರತ್ಯುತ್ತರ ವಾಗಿ--ನಾನು ನೀರಿನಿಂದ ಬಾಪ್ತಿಸ್ಮ ಮಾಡಿಸುತ್ತೇನೆ; ಆದರೆ ನೀವು ಅರಿಯದಿರುವಂಥ ಒಬ್ಬಾತನು ನಿಮ್ಮ ಮಧ್ಯದಲ್ಲಿ ನಿಂತಿದ್ದಾನೆ;

26. "I baptize with water," John replied, "but among you stands one you do not know.

27. ಆತನೇ ನನ್ನ ಹಿಂದೆ ಬರು ವಾತನಾಗಿದ್ದು ನನಗಿಂತ ಮುಂದಿನವನಾದನು; ಆತನ ಕೆರದ ಬಾರನ್ನು ಬಿಚ್ಚುವದಕ್ಕೆ ನಾನು ಯೋಗ್ಯನಲ್ಲ ಎಂದು ಹೇಳಿದನು.

27. He is the one who comes after me, the thongs of whose sandals I am not worthy to untie."

28. ಇವುಗಳು ಯೊರ್ದನಿನ ಆಚೆ ಕಡೆಯ ಬೇಥಾಬರದಲ್ಲಿ ನಡೆದವು; ಅಲ್ಲಿ ಯೋಹಾನನು ಬಾಪ್ತಿಸ್ಮ ಮಾಡಿಸುತ್ತಿದ್ದನು.

28. This all happened at Bethany on the other side of the Jordan, where John was baptizing.

29. ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ--ಇಗೋ, ಲೋಕದ ಪಾಪ ವನ್ನು ತೆಗೆದುಹಾಕುವ ದೇವರ ಕುರಿಮರಿ ಎಂದು ಹೇಳಿದನು.

29. The next day John saw Jesus coming toward him and said, "Look, the Lamb of God, who takes away the sin of the world!

30. ನನ್ನ ಹಿಂದೆ ಒಬ್ಬ ಮನುಷ್ಯನು ಬರು ತ್ತಾನೆ; ಆತನು ನನಗಿಂತ ಮೊದಲೇ ಇದ್ದದರಿಂದ ನನಗಿಂತ ಮುಂದಿನವನು ಎಂದು ನಾನು ಯಾರ ವಿಷಯದಲ್ಲಿ ಹೇಳಿದೆನೋ ಆತನೇ ಈತನು.

30. This is the one I meant when I said, 'A man who comes after me has surpassed me because he was before me.'

31. ನಾನು ಆತನನ್ನು ಅರಿತಿರಲಿಲ್ಲ; ಆದರೆ ಆತನು ಇಸ್ರಾಯೇಲ್ಯರಿಗೆ ಪ್ರತ್ಯಕ್ಷನಾಗುವಂತೆ ನಾನು ನೀರಿನಿಂದ ಬಾಪ್ತಿಸ್ಮ ಮಾಡಿಸುವವನಾಗಿ ಬಂದಿದ್ದೇನೆ ಅಂದನು.

31. I myself did not know him, but the reason I came baptizing with water was that he might be revealed to Israel."

32. ಯೋಹಾನನು ಸಾಕ್ಷಿಕೊಟ್ಟು--ಆತ್ಮನು ಪಾರಿವಾಳ ದಂತೆ ಪರಲೋಕದಿಂದ ಇಳಿದು ಆತನ ಮೇಲೆ ನೆಲೆ ಗೊಂಡಿರುವದನ್ನು ನಾನು ನೋಡಿದೆನು.

32. Then John gave this testimony: "I saw the Spirit come down from heaven as a dove and remain on him.

33. ನಾನು ಆತನನ್ನು ಅರಿತಿರಲಿಲ್ಲ; ಆದರೆ ನೀರಿನಿಂದ ಬಾಪ್ತಿಸ್ಮ ಮಾಡಿಸುವದಕ್ಕೆ ನನ್ನನ್ನು ಕಳುಹಿಸಿದಾತನೇ ನನಗೆ-- ಯಾವಾತನ ಮೇಲೆ ಆತ್ಮನು ಇಳಿದು ನೆಲೆಯಾಗಿರು ವದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮ ನಿಂದ ಬಾಪ್ತಿಸ್ಮ ಮಾಡಿಸುವಾತನು ಎಂದು ಹೇಳಿದನು.

33. I would not have known him, except that the one who sent me to baptize with water told me, 'The man on whom you see the Spirit come down and remain is he who will baptize with the Holy Spirit.'

34. ನಾನು ನೋಡಿ ಈತನೇ ದೇವರಮಗನೆಂದು ಸಾಕ್ಷಿ ಕೊಟ್ಟಿದ್ದೇನೆ ಅಂದನು.

34. I have seen and I testify that this is the Son of God."

35. ಮಾರನೆಯ ದಿನ ತಿರಿಗಿ ಯೋಹಾನನೂ ಅವನ ಶಿಷ್ಯರಲ್ಲಿ ಇಬ್ಬರೂ ನಿಂತುಕೊಂಡಿದ್ದರು.

35. The next day John was there again with two of his disciples.

36. ಆಗ ನಡೆ ದಾಡುತ್ತಿದ್ದ ಯೇಸುವನ್ನು ನೋಡಿ ಅವನು (ಯೋಹಾ ನನು)--ಇಗೋ, ದೇವರ ಕುರಿಮರಿ! ಎಂದು ಹೇಳಿದನು.

36. When he saw Jesus passing by, he said, "Look, the Lamb of God!"

37. ಅವನು ಹೇಳಿದ್ದನ್ನು ಕೇಳಿ ಆ ಇಬ್ಬರು ಶಿಷ್ಯರು ಯೇಸುವಿನ ಹಿಂದೆ ಹೋದರು.

37. When the two disciples heard him say this, they followed Jesus.

38. ಆಗ ಯೇಸು ಹಿಂತಿರುಗಿ ತನ್ನ ಹಿಂದೆ ಬರುತ್ತಿದ್ದವರನ್ನು ನೋಡಿ ಅವರಿಗೆ--ನೀವು ಏನು ಹುಡುಕುತ್ತೀರಿ? ಅನ್ನಲು ಅವರು ಆತನಿಗೆ--ರಬ್ಬಿಯೇ, (ರಬ್ಬಿ ಅಂದರೆ ಗುರು ಎಂದರ್ಥ) ನೀನು ವಾಸಿಸುವದು ಎಲ್ಲಿ ಅಂದರು.

38. Turning around, Jesus saw them following and asked, "What do you want?" They said, "Rabbi" (which means Teacher), "where are you staying?"

39. ಆತನು ಅವರಿಗೆ--ಬಂದು ನೋಡಿರಿ ಅಂದನು. ಅವರು ಹೋಗಿ ಆತನು ವಾಸಿಸುತ್ತಿದ್ದ ಸ್ಥಳವನ್ನು ನೋಡಿ ಆ ದಿವಸ ಆತನ ಸಂಗಡ ಇದ್ದರು. ಆಗ ಹೆಚ್ಚು ಕಡಿಮೆ ಹತ್ತನೆಯ ತಾಸಾಗಿತ್ತು.

39. "Come," he replied, "and you will see." So they went and saw where he was staying, and spent that day with him. It was about the tenth hour.

40. ಯೋಹಾ ನನ ಮಾತನ್ನು ಕೇಳಿ ಆತನನ್ನು ಹಿಂಬಾಲಿಸಿದ ಇಬ್ಬರಲ್ಲಿ ಸೀಮೋನ್‌ ಪೇತ್ರನ ಸಹೋದರನಾದ ಅಂದ್ರೆಯನು ಒಬ್ಬನಾಗಿದ್ದನು.

40. Andrew, Simon Peter's brother, was one of the two who heard what John had said and who had followed Jesus.

41. ಇವನು ಮೊದಲು ತನ್ನ ಸ್ವಂತ ಸಹೋದರನಾದ ಸೀಮೋನನನ್ನು ಕಂಡು ಅವ ನಿಗೆ--ನಾವು ಮೆಸ್ಸೀಯನನ್ನು ಕಂಡುಕೊಂಡೆವು ಎಂದು ಹೇಳಿದನು (ಮೆಸ್ಸೀಯನು ಅಂದರೆ ಕ್ರಿಸ್ತನು ಎಂದರ್ಥ).

41. The first thing Andrew did was to find his brother Simon and tell him, "We have found the Messiah" (that is, the Christ).

42. 42ಆಗ ಅಂದ್ರೆಯನು ಸೀಮೋನನ್ನು ಯೇಸುವಿನ ಬಳಿಗೆ ಕರಕೊಂಡು ಬಂದನು. ಯೇಸು ಅವನನ್ನು ನೋಡಿ--ನೀನು ಯೋನನ ಮಗನಾದ ಸೀಮೋನನು, ನೀನು ಕೇಫನೆಂದು ಕರೆಯಲ್ಪಡುವಿ ಅಂದನು. (ಕೇಫ ಅಂದರೆ ಕಲ್ಲು ಎಂದರ್ಥ).

42. And he brought him to Jesus. Jesus looked at him and said, "You are Simon son of John. You will be called Cephas" (which, when translated, is Peter ).

43. ಮರುದಿನ ಯೇಸು ಗಲಿಲಾಯಕ್ಕೆ ಹೊರಟು ಹೋಗಬೇಕೆಂದಿದ್ದಾಗ ಫಿಲಿಪ್ಪನನ್ನು ಕಂಡು ಅವ ನಿಗೆ--ನನ್ನನ್ನು ಹಿಂಬಾಲಿಸು ಅಂದನು.

43. The next day Jesus decided to leave for Galilee. Finding Philip, he said to him, "Follow me."

44. ಫಿಲಿಪ್ಪನು ಅಂದ್ರೆಯನ ಮತ್ತು ಪೇತ್ರನ ಪಟ್ಟಣವಾದ ಬೇತ್ಸಾಯಿ ದವನು.

44. Philip, like Andrew and Peter, was from the town of Bethsaida.

45. ಫಿಲ್ಫಿಪನು ನತಾನಯೇಲನನ್ನು ಕಂಡು ಅವನಿಗೆ--ನ್ಯಾಯಪ್ರಮಾಣದಲ್ಲಿ ಮೋಶೆಯು ಮತ್ತು ಪ್ರವಾದಿಗಳು ಯಾವಾತನ ವಿಷಯವಾಗಿ ಬರೆದರೋ ಆತನನ್ನು ನಾವು ಕಂಡುಕೊಂಡೆವು; ಆತನು ಯೋಸೇ ಫನ ಮಗನಾದ ನಜರೇತಿನ ಯೇಸುವು ಅಂದನು.

45. Philip found Nathanael and told him, "We have found the one Moses wrote about in the Law, and about whom the prophets also wrote--Jesus of Nazareth, the son of Joseph."

46. ಅದಕ್ಕೆ ನತಾನಯೇಲನು ಅವನಿಗೆ--ನಜರೇತಿ ನಿಂದ ಒಳ್ಳೇದೇನಾದರೂ ಬರುವದೋ? ಅಂದಾಗ ಫಿಲಿಪ್ಪನು ಅವನಿಗೆ--ಬಂದು ನೋಡು ಅಂದನು.

46. "Nazareth! Can anything good come from there?" Nathanael asked. "Come and see," said Philip.

47. ಯೇಸು ತನ್ನ ಬಳಿಗೆ ಬರುವ ನತಾನಯೇಲನನ್ನು ಕಂಡು ಅವನ ವಿಷಯವಾಗಿ--ಇಗೋ, ಇವನು ನಿಜ ವಾಗಿಯೂ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ ಅಂದನು.

47. When Jesus saw Nathanael approaching, he said of him, "Here is a true Israelite, in whom there is nothing false."

48. ನತಾನಯೇಲನು ಆತನಿಗೆ--ನೀನು ನನ್ನನ್ನು ಹೇಗೆ ಬಲ್ಲೆ? ಅಂದನು; ಯೇಸು ಪ್ರತ್ಯುತ್ತರ ವಾಗಿ ಅವನಿಗೆ--ಫಿಲಿಪ್ಪನು ನಿನ್ನನ್ನು ಕರೆಯುವದಕ್ಕಿಂತ ಮುಂಚೆ ನೀನು ಆ ಅಂಜೂರ ಮರದ ಕೆಳಗೆ ಇದ್ದಾಗ ನಾನು ನಿನ್ನನ್ನು ನೋಡಿದೆನು ಅಂದನು.

48. "How do you know me?" Nathanael asked. Jesus answered, "I saw you while you were still under the fig tree before Philip called you."

49. ನತಾನ ಯೇಲನು ಪ್ರತ್ಯುತ್ತರವಾಗಿ ಆತನಿಗೆ--ರಬ್ಬಿಯೇ, ನೀನು ದೇವರಕುಮಾರನು; ನೀನು ಇಸ್ರಾಯೇಲಿನ ಅರಸನು ಅಂದನು.

49. Then Nathanael declared, "Rabbi, you are the Son of God; you are the King of Israel."

50. ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಆ ಅಂಜೂರ ಮರದ ಕೆಳಗೆ ನಿನ್ನನ್ನು ನೋಡಿದೆನೆಂದು ಹೇಳಿದ್ದರಿಂದ ನೀನು ನಂಬು ತ್ತೀಯೋ? ನೀನು ಇವುಗಳಿಗಿಂತ ಮಹತ್ತಾದವುಗಳನ್ನು ನೋಡುವಿ ಅಂದನು.ಆತನು ಅವನಿಗೆ--ನಿನಗೆ ನಿಜನಿಜವಾಗಿ ಹೇಳುತ್ತೇನೆ. ಇಂದಿನಿಂದ ಪರಲೋಕವು ತೆರೆದಿರುವದನ್ನೂ ದೇವದೂತರು ಮನುಷ್ಯಕುಮಾರನ ಮೇಲೆ ಏರುವದನ್ನೂ ಇಳಿಯುವದನ್ನೂ ನೀವು ನೋಡುವಿರಿ ಅಂದನು.

50. Jesus said, "You believe because I told you I saw you under the fig tree. You shall see greater things than that."

51. ಆತನು ಅವನಿಗೆ--ನಿನಗೆ ನಿಜನಿಜವಾಗಿ ಹೇಳುತ್ತೇನೆ. ಇಂದಿನಿಂದ ಪರಲೋಕವು ತೆರೆದಿರುವದನ್ನೂ ದೇವದೂತರು ಮನುಷ್ಯಕುಮಾರನ ಮೇಲೆ ಏರುವದನ್ನೂ ಇಳಿಯುವದನ್ನೂ ನೀವು ನೋಡುವಿರಿ ಅಂದನು.

51. He then added, "I tell you the truth, you shall see heaven open, and the angels of God ascending and descending on the Son of Man."

Why do ads appear in this Website?

×